
ಇತ್ತೀಚಿನ ದಿನಗಳಲ್ಲಿ ಆರ್ಕುಟ್, ಫೆಸ್-ಬುಕ್ ಮುಂತಾದ ಸಾಮಾಜಿಕ ಜಾಲತಾಣಗಳ ಬಳಕೆ ಹೆಚ್ಚುತ್ತಲೇ ಇದೆ, ದಿನದಿಂದ ದಿನಕ್ಕೆ ವಿವಿಧ ದೇಶದ ಜನರು ಇಂಥ ಜಾಲತಾಣಗಳಿಗೆ ಸದಸ್ಯರಾಗುತ್ತಿದ್ದಾರೆ. ನೀವೂ ಇಂಥ ಜಾಲತಾಣಗಳ ಸದಸ್ಯರಾಗಿದ್ದರೆ ಅಥವಾ ಸದಸ್ಯರಾಗಲು ಹೊರಟಿದ್ದರೆ ಕೆಲವೊಂದು ಮುನ್ನೆಚ್ಚರಿಕೆಗಳನ್ನು ಅನುಸರಿಸಬೇಕಾಗುತ್ತದೆ. ಅವುಗಳೆಂದರೆ- | |
೧] ನಿಮ್ಮ ಅತೀ ಸೂಕ್ಷ್ಮ ವಿಷಯಗಳನ್ನು ಅಲ್ಲಿ ನಮೂದಿಸಬೇಡಿ ಏಕೆಂದರೆ ಕೆಲವರು ಅಂಥ ಮಾಹಿತಿಯನ್ನು ದುರುಪಯೋಗ ಪಡಿಸಿಕೊಂಡು ನಿಮಗೆ ತೊಂದರೆ ಕೊಡುವ ಅವಕಾಶಗಳಿರುತ್ತವೆ. ೨] ನಿಮ್ಮ ಸ್ಥಿರ ದೂರವಾಣಿ ಅಥವಾ ಸಂಚಾರಿ ದೂರವಾಣಿ (ಮೊಬೈಲ್) ಸಂಖ್ಯೆಗಳನ್ನು ನಮೂದಿಸಬೇಡಿ, ಇದನ್ನು ಸ್ಪಾಮರ್ ಗಳು ಬಳಸಿಕೊಂಡು ನಿಮಗೆ ಪಠ್ಯ ಸಂದೇಶ ಅಥವಾ ಕರೆ ಮಾಡಿ ನಿಮಗೆ ತೊಂದರೆಯನ್ನು ಕೊಡಬಹುದು. ೩] ನಿಮಗೆ "ಸ್ನೇಹ ವಿನಂತಿ" (ಫ್ರೆಂಡ್ ರಿಕ್ವೆಸ್ಟ್) ಕಳುಹಿಸಿದ ಎಲ್ಲ ಸದಸ್ಯರನ್ನು ಸ್ನೇಹಿತರನ್ನಾಗಿ ಸ್ವೀಕರಿಸಬೇಡಿ ಏಕೆಂದರೆ ಇನ್ನೊಬ್ಬರ ಹೆಸರಿನಲ್ಲಿ ಖಾತೆ ತೆಗೆದು ನಿಮ್ಮ ಸ್ನೇಹಿತರಾಗಿ ನಿಮ್ಮ ವೈಯಕ್ತಿಕ ಮಾಹಿತಿ ಪಡೆದು ನಿಮಗೆ ಮೋಸ ಮಾಡಬಹುದು ಆದ್ದರಿಂದ ಮೊದಲು ಅವರು ಯಾರೆಂದು ಪರಿಶೀಲಿಸಿದ ನಂತರವೇ ಅವರ ಸ್ನೇಹ ವಿನಂತಿಯನ್ನು ಸ್ವೀಕರಿಸಿ. ೪] ನಿಮ್ಮ ಸಾಮಾಜಿಕ ಜಾಲತಾಣ ಇನ್-ಬಾಕ್ಸಗೆ ಯಾವುದಾದರು ಗೊತ್ತಿರದ ಮಿಂಚಂಚೆ (ಇ-ಮೇಲ್) ಬಂದಲ್ಲಿ ಮೊದಲು ಅದನ್ನು ಒಳ್ಳೆಯ ಎಂಟಿ-ವೈರಸದಿಂದ ಪರಿಶೀಲಿಸಿ, ಯಾವುದೇ ವೈರಸ್ ಇಲ್ಲವೆಂದು ಖಚಿತ ಪಡಿಸಿಕೊಂಡ ನಂತರವೇ ಅದನ್ನು ತೆಗೆಯಿರಿ. ೫] ನೀವು ಸೈಬರ್ ಕೆಫೆಗಳಲ್ಲಿ ಸಾಮಾಜಿಕ ಜಾಲತಾಣವನ್ನು ನೋಡುತ್ತಿದ್ದರೆ ನಿಮ್ಮ ಕಾರ್ಯ ಮುಗಿದ ನಂತರ "ಸೈನ-ಔಟ್" ಮಾಡಲು ಮರೆಯದಿರಿ ಮತ್ತು "ಟೂಲ್ಸ್" ಮೆನುವಿಗೆ ಹೋಗಿ "ಡಿಲಿಟ್ ಬ್ರೌಸಿಂಗ್ ಹಿಸ್ಟರಿ" ಆಯ್ಕೆಯನ್ನು ಅದುಮಿ ಬ್ರೌಸಿಂಗ ಇತಿಹಾಸವನ್ನು ಅಳಿಸಿ ಹಾಕಿ. ಇದು ನಿಮ್ಮ ಗುಪ್ತತೆಯನ್ನು (ಪ್ರೈವಸಿ) ಕಾಪಾಡಿಕೊಳ್ಳುವ ಅತ್ಯಂತ ಸುಲಭ ವಿಧಾನವಾಗಿದೆ. |
0 comments:
Post a Comment