Saturday, January 30, 2010
ಮೊಬೈಲ್ ಸಂದೇಶವನ್ನು ಕನ್ನಡದಲ್ಲೇ ಕಳುಹಿಸಲು ಉಚಿತ ತಂತ್ರಾಂಶ!
IndiSMS ಒಂದು ಉಚಿತ ಮೊಬೈಲ್ ಸಂದೇಶ ರವಾನೆ ತಂತ್ರಾಂಶವಾಗಿದ್ದು ಇದನ್ನು ನಿಮ್ಮ ಮೊಬೈಲ್ನಲ್ಲಿ ಅನುಸ್ಥಾಪಿಸಿಕೊಂಡು ಭಾರತೀಯ ಭಾಷೆಗಳಲ್ಲಿ ಉಚಿತವಾಗಿ ಸಂದೇಶಗಳನ್ನು ಕಳುಹಿಸಬಹುದು ಮತ್ತು ಇದಕ್ಕೆ ಇಂಟರ್ನೆಟ್ ಸೌಲಭ್ಯ ಬೇಕಾಗುವುದಿಲ್ಲ. ಕನ್ನಡ, ಹಿಂದಿ, ಪಂಜಾಬಿ, ಗುಜರಾತಿ ಮತ್ತು ಬೆಂಗಾಲಿ ಮುಂತಾದ ಭಾಷೆಗಳಲ್ಲಿ ನೀವು ಸಂದೇಶವನ್ನು ಕಳುಹಿಸಬಹುದು. ಅಷ್ಟೇ ಅಲ್ಲದೇ ಬೇರೆಯವರು ಭಾರತೀಯ ಭಾಷೆಗಳಲ್ಲಿ ಕಳುಹಿಸಿದ ಸಂದೇಶವನ್ನು ಸಹ ವೀಕ್ಷಿಸಬಹುದು. ಈ ಉಚಿತ ತಂತ್ರಾಂಶವನ್ನು Eterno Infotech ತಯಾರಿಸಿದೆ. ಹೆಚ್ಚಿನ ಮಾಹಿತಿಗಾಗಿ ಮತ್ತು ಡೌನ್ಲೋಡ್ ಮಾಡಿಕೊಳ್ಳಲು www.eternoinfotech.com ಅಥವಾ www.indisms.in ಗೆ ಭೇಟಿ ಕೊಡಿ.
Subscribe to:
Post Comments (Atom)
0 comments:
Post a Comment