ಕಂಪ್ಯು ಇನ್ ಕನ್ನಡ ಲೇಖನ ಪುಟಕ್ಕೆ ಸುಸ್ವಾಗತ ಇಲ್ಲಿ ನೀವು ಕಂಪ್ಯು ಇನ್ ಕನ್ನಡದಲ್ಲಿ ಪ್ರಕಟಿಸಿದ ಎಲ್ಲ ಲೇಖನಗಳನ್ನು ವೀಕ್ಷಿಸಬಹುದು ಮತ್ತು ನಿಮ್ಮ ಅಭಿಪ್ರಾಯವನ್ನು ಹಂಚಿಕೊಳ್ಳಬಹುದು. ಕಂಪ್ಯು ಇನ್ ಕನ್ನಡದ ಮುಖ್ಯ ಜಾಲತಾಣಕ್ಕೆ ಹೋಗಲು ಇಲ್ಲಿ ಕ್ಲಿಕ್ಕಿಸಿ. www.compuinkannada.co.cc

Wednesday, January 20, 2010

ತಂತ್ರಾಂಶಗಳ ಪ್ರಕಾರಗಳು

ನಾವು ಉಪಯೋಗಿಸುವ ತಂತ್ರಾಂಶಗಳಲ್ಲಿ ಹಲವು ಪ್ರಕಾರಗಳಿವೆ. ಅವುಗಳಲ್ಲಿ ಮುಖ್ಯವಾದವುಗಳೆಂದರೆ Shareware, Freeware, Donationware, Adware ಮುಂತಾದವುಗಳು.

Shareware (ಶೇರ್‌ವೆರ್): ಈ ತಂತ್ರಾಂಶಗಳನ್ನು ಹಣ ಕೊಟ್ಟು ಕೊಂಡುಕೊಳ್ಳಬೇಕಾಗುತ್ತದೆ ಮತ್ತು ಇವುಗಳಿಗೆ ಅಂತರಾಷ್ಟ್ರಿಯ ಹಕ್ಕುಗಳು (ಕಾಪಿರೈಟ್) ಇರುತ್ತದೆ ಆದ್ದರಿಂದ ಇವನ್ನು ಕೊಂಡುಕೊಳ್ಳುವವರು ಮಾತ್ರ ಉಪಯೋಗಿಸಬೇಕೆಂಬ ನಿಬಂಧನೆಗಳಿರುತ್ತವೆ ಮತ್ತು ಈ ನಿಬಂಧನೆಗಳನ್ನು ಒಪ್ಪಿಕೊಂಡರೆ ಮಾತ್ರ ನೀವು ಇವುಗಳನ್ನು ಉಪಯೋಗಿಸಬಹುದು. ಉದಾಹರಣೆಗೆ ಮೈಕ್ರೊಸಾಫ್ಟ್ ಆಫಿಸ್, ಕ್ಯುಟ್ ಎಫ್.ಟಿ.ಪಿ

Freeware (ಫ್ರೀವೆರ್): ಇಂತಹ ತಂತ್ರಾಂಶಗಳನ್ನು ನೀವು ಉಚಿತವಾಗಿ ಉಪಯೋಗಿಸಬಹುದು ಮತ್ತು ಇತರರೊಂದಿಗೆ ಹಂಚಿಕೊಳ್ಳಬಹುದು. ಇವುಗಳು ಉಚಿತ ಅಥವಾ GNU ಹಕ್ಕುಗಳನ್ನು ಹೊಂದಿರುತ್ತವೆ. ಇವಗಳಲ್ಲಿಯ ಒಪನ್ ಸೌರ್ಸ್ ತಂತ್ರಾಂಶಗಳನ್ನು ನೀವೂ ಕೂಡ ಹೆಚ್ಚಿನ ಅಭಿವೃದ್ಧಿ ಪಡಿಸಿ ಉಪಯೋಗಿಸಬಹುದು ಮತ್ತು ಇತರರೊಂದಿಗೆ ಹಂಚಿಕೊಳ್ಳಬಹುದು. ಉದಾಹರಣೆಗೆ ಬರಹ, ನುಡಿ, ಕನ್ನಡ ಜಾಲತಾಣ ನಿರ್ವಾಹಕ, ಪಿಕಾಸಾ, ಫೈಲ್‌ಝಿಲ್ಲಾ

Donationware (ಡೊನೆಶನ್‌ವೆರ್): ಇಂತಹ ತಂತ್ರಾಂಶಗಳನ್ನೂ ನೀವು ಉಚಿತವಾಗಿ ಉಪಯೋಗಿಸಬಹುದು ಮತ್ತು ನಿಮಗೆ ಆ ತಂತ್ರಾಂಶ ಉಪಯುಕ್ತವೆನಿಸಿದಲ್ಲಿ ಆ ತಂತ್ರಾಂಶ ತಯಾರಕರಿಗೆ ಹಣವನ್ನು ದಾನವಾಗಿ ಕೊಡಬಹುದು. ಆ ತಂತ್ರಾಂಶವನ್ನು ಇನ್ನೂ ಹೆಚ್ಚು ಅಭಿವೃದ್ಧಿ ಪಡಿಸಲು ನೀವು ಪ್ರೋತ್ಸಾಹಿಸಿದಂತಾಗುತ್ತದೆ. ಉದಾಹರಣೆಗೆ ವಿ.ಎಲ್.ಸಿ ಮೀಡಿಯಾ ಪ್ಲೇಯರ್

Adware (ಆಡ್‌ವೆರ್): ಈ ತಂತ್ರಾಂಶಗಳ ಮೂಲಕ ಅದನ್ನು ಅಭಿವೃದ್ಧಿ ಪಡಿಸಿದವರು ತಮ್ಮ ಸಂಸ್ಥೆಯ ಅಥವಾ ಇತರರ ಜಾಹಿರಾತುಗಳನ್ನು ಪ್ರಚಾರ ಮಾಡುತ್ತಾರೆ.

0 comments:

Post a Comment