ಕಂಪ್ಯು ಇನ್ ಕನ್ನಡ ಲೇಖನ ಪುಟಕ್ಕೆ ಸುಸ್ವಾಗತ ಇಲ್ಲಿ ನೀವು ಕಂಪ್ಯು ಇನ್ ಕನ್ನಡದಲ್ಲಿ ಪ್ರಕಟಿಸಿದ ಎಲ್ಲ ಲೇಖನಗಳನ್ನು ವೀಕ್ಷಿಸಬಹುದು ಮತ್ತು ನಿಮ್ಮ ಅಭಿಪ್ರಾಯವನ್ನು ಹಂಚಿಕೊಳ್ಳಬಹುದು. ಕಂಪ್ಯು ಇನ್ ಕನ್ನಡದ ಮುಖ್ಯ ಜಾಲತಾಣಕ್ಕೆ ಹೋಗಲು ಇಲ್ಲಿ ಕ್ಲಿಕ್ಕಿಸಿ. www.compuinkannada.co.cc

Thursday, January 21, 2010

ನಿಮ್ಮ ಗಣಕದ ಪರದೆ (ಮಾನಿಟರ್) ಚೆನ್ನಾಗಿ ಕಾಣಲು ಕೆಲವು ಬದಲಾವಣೆಗಳು

ಎಲ್ಲ ಗಣಕಗಳೂ ಒಂದೇ ರೀತಿ ಇರುವುದರಿಲ್ಲ, ಅವುಗಳ ವೇಗ ಮತ್ತು ಸಾಮರ್ಥ್ಯದ ಮೇಲೆ ಅವುಗಳ ಸೆಟ್ಟಿಂಗ್‌ಗಳನ್ನು ಬದಲಾವಣೆ ಮಾಡಬೇಕಾಗುತ್ತದೆ. ಉದಾಹರಣೆಗೆ ಇತ್ತೀಚಿಗೆ ಮಾರುಕಟ್ಟೆಗೆ ಬಂದಿರುವ ಹೊಸ ಮಾನಿಟರುಗಳಿಗೆ ೮೦೦x೬೦೦ ಸ್ಕ್ರೀನ್ ರೆಸೊಲುಶನ್ ಇಟ್ಟರೆ ಅವು ಅಷ್ಟು ಚೆನ್ನಾಗಿ ಕಾಣುವುದಿಲ್ಲ, ಅವುಗಳಿಗೆ ಏನಿದ್ದರೂ ೧೨೮೦x೮೦೦ ಅಥವಾ ಅವಕ್ಕೆ ಅನುಗುಣವಾದ ಸ್ಕ್ರೀನ್ ರೆಸೊಲುಶನ್ ಇಟ್ಟರೇ ಅವು ಚೆನ್ನಾಗಿ ಕಾಣುತ್ತವೆ.

ನಿಮ್ಮ ಮಾನಿಟರ್ ಹಳೆಯದಾಗಿದ್ದರೆ ಅದಕ್ಕೆ ೮೦೦x೬೦೦ ಸ್ಕ್ರೀನ್ ರೆಸೊಲುಶನ್ ಇಡಬಹುದು ಮತ್ತು ಪರದೆ ಅಲ್ಲಾಡುತ್ತಿದ್ದರೆ (ಶೇಕ್) ರಿಫ್ರೆಶ್ ರೇಟ್‌ಅನ್ನು ಅಧಿಕಗೊಳಿಸಿ.
ರಿಫ್ರೆಶ್ ರೇಟ್‌ಅನ್ನು ಅಧಿಕಗೊಳಿಸಲು ಈ ಕೆಳಕಂಡ ವಿಧಾನವನ್ನು ಅನುಸರಿಸಿ-
೧] ಮೊದಲು ನಿಮ್ಮ ಡೆಸ್ಕ್‌ಟಾಪ್‌ನ ಮೇಲೆ ಬಲ ಕ್ಲಿಕ್ (ರೈಟ್ ಕ್ಲಿಕ್) ಮಾಡಿ
೨] "ಪ್ರಾಪರ್ಟಿಸ್" ಆಯ್ಕೆಯನ್ನು ಆಯ್ದುಕೊಂಡು ನಂತರ "ಸೆಟ್ಟಿಂಗ್ಸ್" ಟ್ಯಾಬ್‌ಅನ್ನು ಕ್ಲಿಕ್ ಮಾಡಿ
೩] ಈಗ "ಅಡ್ವಾನ್ಸಡ್" ಗುಂಡಿಯನ್ನು ಅದುಮಿ
೪] ನಂತರ "ಮಾನಿಟರ್" ಎಂಬ ಟ್ಯಾಬ್‌ಅನ್ನು ಕ್ಲಿಕ್ ಮಾಡಿ "ಸ್ಕ್ರೀನ್ ರಿಫ್ರೆಶ್ ರೇಟ್" ಅನ್ನು ಅಧಿಕಮಾಡಿ [೭೦ ಅಥವಾ ೮೦]

0 comments:

Post a Comment