ಕಂಪ್ಯು ಇನ್ ಕನ್ನಡ ಲೇಖನ ಪುಟಕ್ಕೆ ಸುಸ್ವಾಗತ ಇಲ್ಲಿ ನೀವು ಕಂಪ್ಯು ಇನ್ ಕನ್ನಡದಲ್ಲಿ ಪ್ರಕಟಿಸಿದ ಎಲ್ಲ ಲೇಖನಗಳನ್ನು ವೀಕ್ಷಿಸಬಹುದು ಮತ್ತು ನಿಮ್ಮ ಅಭಿಪ್ರಾಯವನ್ನು ಹಂಚಿಕೊಳ್ಳಬಹುದು. ಕಂಪ್ಯು ಇನ್ ಕನ್ನಡದ ಮುಖ್ಯ ಜಾಲತಾಣಕ್ಕೆ ಹೋಗಲು ಇಲ್ಲಿ ಕ್ಲಿಕ್ಕಿಸಿ. www.compuinkannada.co.cc

Saturday, January 30, 2010

BSNL ಗ್ರಾಹಕರಿಗೆ ರಿಯಾಯಿತಿ

DataOne BSNL ಬ್ರಾಡಬ್ಯಾಂಡ್ ವು ತನ್ನ ಬ್ರಾಡಬ್ಯಾಂಡ್ ಸೇವೆಯನ್ನು ವಿಸ್ತರಿಸಲು ಮತ್ತು ಅದರ ಬಳಕೆಯನ್ನು ಹೆಚ್ಚಿಸಲು ಸರ್ಕಾರಿ ನೌಕರಿಯಲ್ಲಿರುವ ಗ್ರಾಹಕರಿಗೆ ಮತ್ತು ದೃಷ್ಟಿಯ ತೊಂದರೆಯಿರುವ ಗ್ರಾಹಕರಿಗೆ % ೨೦ ರಷ್ಟು ರಿಯಾಯಿತಿಯನ್ನು ನೀಡಿದೆ. ಈ ಯೋಜನೆಯು ಡಿಸೆಂಬರ್ ೧ ೨೦೦೮ ರಿಂದ ಪ್ರಾರಂಭವಾಗಿದೆ. ಈ ಯೋಜನೆಯ ಸದುಪಯೋಗವನ್ನು ಎಲ್ಲ BSNL ಬ್ರಾಡ್‍ಬ್ಯಾಂಡ್ ಗ್ರಾಹಕರು ಪಡೆಯಬಹುದು ಮತ್ತು ಸದ್ಯಕ್ಕೆ ಚಾಲ್ತಿಯಲ್ಲಿರುವ BSNL ಬ್ರಾಡ್‍ಬ್ಯಾಂಡ್ ಗ್ರಾಹಕರು ಪಡೆದುಕೊಳ್ಳಬಹುದು. ಸರ್ಕಾರಿ ನೌಕರರು ಈ ರಿಯಾಯಿತಿಯನ್ನು ಪಡೆದುಕೊಳ್ಳಲು ತಾವು ಸರ್ಕಾರಿ ನೌಕರಿಯಲ್ಲಿರುವುದಾಗಿ ತಮ್ಮ ಕಛೇರಿಯಿಂದ ಒಂದು ಪ್ರಮಾಣ ಪತ್ರವನ್ನು (certificate) BSNL ಕಛೇರಿಗೆ ಸಲ್ಲಿಸಬೇಕಾಗುತ್ತದೆ.

ಮೊಬೈಲ್ ಸಂದೇಶವನ್ನು ಕನ್ನಡದಲ್ಲೇ ಕಳುಹಿಸಲು ಉಚಿತ ತಂತ್ರಾಂಶ!

IndiSMS ಒಂದು ಉಚಿತ ಮೊಬೈಲ್ ಸಂದೇಶ ರವಾನೆ ತಂತ್ರಾಂಶವಾಗಿದ್ದು ಇದನ್ನು ನಿಮ್ಮ ಮೊಬೈಲ್‍ನಲ್ಲಿ ಅನುಸ್ಥಾಪಿಸಿಕೊಂಡು ಭಾರತೀಯ ಭಾಷೆಗಳಲ್ಲಿ ಉಚಿತವಾಗಿ ಸಂದೇಶಗಳನ್ನು ಕಳುಹಿಸಬಹುದು ಮತ್ತು ಇದಕ್ಕೆ ಇಂಟರ‍್ನೆಟ್ ಸೌಲಭ್ಯ ಬೇಕಾಗುವುದಿಲ್ಲ. ಕನ್ನಡ, ಹಿಂದಿ, ಪಂಜಾಬಿ, ಗುಜರಾತಿ ಮತ್ತು ಬೆಂಗಾಲಿ ಮುಂತಾದ ಭಾಷೆಗಳಲ್ಲಿ ನೀವು ಸಂದೇಶವನ್ನು ಕಳುಹಿಸಬಹುದು. ಅಷ್ಟೇ ಅಲ್ಲದೇ ಬೇರೆಯವರು ಭಾರತೀಯ ಭಾಷೆಗಳಲ್ಲಿ ಕಳುಹಿಸಿದ ಸಂದೇಶವನ್ನು ಸಹ ವೀಕ್ಷಿಸಬಹುದು. ಈ ಉಚಿತ ತಂತ್ರಾಂಶವನ್ನು Eterno Infotech ತಯಾರಿಸಿದೆ. ಹೆಚ್ಚಿನ ಮಾಹಿತಿಗಾಗಿ ಮತ್ತು ಡೌನ್‍ಲೋಡ್ ಮಾಡಿಕೊಳ್ಳಲು www.eternoinfotech.com ಅಥವಾ www.indisms.in ಗೆ ಭೇಟಿ ಕೊಡಿ.

Thursday, January 21, 2010

ಆರ್ಕುಟ್, ಫೆಸ್‌ಬುಕ್ ಇತರೆ ಸಾಮಾಜಿಕ ಅಂತರ್ಜಾಲಗಳ ಬಗ್ಗೆ ಎಚ್ಚರವಿರಲಿ .....


ತ್ತೀಚಿನ ದಿನಗಳಲ್ಲಿ ಆರ್ಕುಟ್, ಫೆಸ್-ಬುಕ್ ಮುಂತಾದ ಸಾಮಾಜಿಕ ಜಾಲತಾಣಗಳ ಬಳಕೆ ಹೆಚ್ಚುತ್ತಲೇ ಇದೆ, ದಿನದಿಂದ ದಿನಕ್ಕೆ ವಿವಿಧ ದೇಶದ ಜನರು ಇಂಥ ಜಾಲತಾಣಗಳಿಗೆ ಸದಸ್ಯರಾಗುತ್ತಿದ್ದಾರೆ. ನೀವೂ ಇಂಥ ಜಾಲತಾಣಗಳ ಸದಸ್ಯರಾಗಿದ್ದರೆ ಅಥವಾ ಸದಸ್ಯರಾಗಲು ಹೊರಟಿದ್ದರೆ ಕೆಲವೊಂದು ಮುನ್ನೆಚ್ಚರಿಕೆಗಳನ್ನು ಅನುಸರಿಸಬೇಕಾಗುತ್ತದೆ. ಅವುಗಳೆಂದರೆ-

೧] ನಿಮ್ಮ ಅತೀ ಸೂಕ್ಷ್ಮ ವಿಷಯಗಳನ್ನು ಅಲ್ಲಿ ನಮೂದಿಸಬೇಡಿ ಏಕೆಂದರೆ ಕೆಲವರು ಅಂಥ ಮಾಹಿತಿಯನ್ನು ದುರುಪಯೋಗ ಪಡಿಸಿಕೊಂಡು ನಿಮಗೆ ತೊಂದರೆ ಕೊಡುವ ಅವಕಾಶಗಳಿರುತ್ತವೆ.
೨] ನಿಮ್ಮ ಸ್ಥಿರ ದೂರವಾಣಿ ಅಥವಾ ಸಂಚಾರಿ ದೂರವಾಣಿ (ಮೊಬೈಲ್) ಸಂಖ್ಯೆಗಳನ್ನು ನಮೂದಿಸಬೇಡಿ, ಇದನ್ನು ಸ್ಪಾಮರ್ ಗಳು ಬಳಸಿಕೊಂಡು ನಿಮಗೆ ಪಠ್ಯ ಸಂದೇಶ ಅಥವಾ ಕರೆ ಮಾಡಿ ನಿಮಗೆ ತೊಂದರೆಯನ್ನು ಕೊಡಬಹುದು.
೩] ನಿಮಗೆ "ಸ್ನೇಹ ವಿನಂತಿ" (ಫ್ರೆಂಡ್ ರಿಕ್ವೆಸ್ಟ್) ಕಳುಹಿಸಿದ ಎಲ್ಲ ಸದಸ್ಯರನ್ನು ಸ್ನೇಹಿತರನ್ನಾಗಿ ಸ್ವೀಕರಿಸಬೇಡಿ ಏಕೆಂದರೆ ಇನ್ನೊಬ್ಬರ ಹೆಸರಿನಲ್ಲಿ ಖಾತೆ ತೆಗೆದು ನಿಮ್ಮ ಸ್ನೇಹಿತರಾಗಿ ನಿಮ್ಮ ವೈಯಕ್ತಿಕ ಮಾಹಿತಿ ಪಡೆದು ನಿಮಗೆ ಮೋಸ ಮಾಡಬಹುದು ಆದ್ದರಿಂದ ಮೊದಲು ಅವರು ಯಾರೆಂದು ಪರಿಶೀಲಿಸಿದ ನಂತರವೇ ಅವರ ಸ್ನೇಹ ವಿನಂತಿಯನ್ನು ಸ್ವೀಕರಿಸಿ.
೪] ನಿಮ್ಮ ಸಾಮಾಜಿಕ ಜಾಲತಾಣ ಇನ್-ಬಾಕ್ಸಗೆ ಯಾವುದಾದರು ಗೊತ್ತಿರದ ಮಿಂಚಂಚೆ (ಇ-ಮೇಲ್) ಬಂದಲ್ಲಿ ಮೊದಲು ಅದನ್ನು ಒಳ್ಳೆಯ ಎಂಟಿ-ವೈರಸದಿಂದ ಪರಿಶೀಲಿಸಿ, ಯಾವುದೇ ವೈರಸ್ ಇಲ್ಲವೆಂದು ಖಚಿತ ಪಡಿಸಿಕೊಂಡ ನಂತರವೇ ಅದನ್ನು ತೆಗೆಯಿರಿ.
೫] ನೀವು ಸೈಬರ್ ಕೆಫೆಗಳಲ್ಲಿ ಸಾಮಾಜಿಕ ಜಾಲತಾಣವನ್ನು ನೋಡುತ್ತಿದ್ದರೆ ನಿಮ್ಮ ಕಾರ್ಯ ಮುಗಿದ ನಂತರ "ಸೈನ-ಔಟ್" ಮಾಡಲು ಮರೆಯದಿರಿ ಮತ್ತು "ಟೂಲ್ಸ್" ಮೆನುವಿಗೆ ಹೋಗಿ "ಡಿಲಿಟ್ ಬ್ರೌಸಿಂಗ್ ಹಿಸ್ಟರಿ" ಆಯ್ಕೆಯನ್ನು ಅದುಮಿ ಬ್ರೌಸಿಂಗ ಇತಿಹಾಸವನ್ನು ಅಳಿಸಿ ಹಾಕಿ. ಇದು ನಿಮ್ಮ ಗುಪ್ತತೆಯನ್ನು (ಪ್ರೈವಸಿ) ಕಾಪಾಡಿಕೊಳ್ಳುವ ಅತ್ಯಂತ ಸುಲಭ ವಿಧಾನವಾಗಿದೆ.

ನಿಮ್ಮ ಗಣಕದ ಪರದೆ (ಮಾನಿಟರ್) ಚೆನ್ನಾಗಿ ಕಾಣಲು ಕೆಲವು ಬದಲಾವಣೆಗಳು

ಎಲ್ಲ ಗಣಕಗಳೂ ಒಂದೇ ರೀತಿ ಇರುವುದರಿಲ್ಲ, ಅವುಗಳ ವೇಗ ಮತ್ತು ಸಾಮರ್ಥ್ಯದ ಮೇಲೆ ಅವುಗಳ ಸೆಟ್ಟಿಂಗ್‌ಗಳನ್ನು ಬದಲಾವಣೆ ಮಾಡಬೇಕಾಗುತ್ತದೆ. ಉದಾಹರಣೆಗೆ ಇತ್ತೀಚಿಗೆ ಮಾರುಕಟ್ಟೆಗೆ ಬಂದಿರುವ ಹೊಸ ಮಾನಿಟರುಗಳಿಗೆ ೮೦೦x೬೦೦ ಸ್ಕ್ರೀನ್ ರೆಸೊಲುಶನ್ ಇಟ್ಟರೆ ಅವು ಅಷ್ಟು ಚೆನ್ನಾಗಿ ಕಾಣುವುದಿಲ್ಲ, ಅವುಗಳಿಗೆ ಏನಿದ್ದರೂ ೧೨೮೦x೮೦೦ ಅಥವಾ ಅವಕ್ಕೆ ಅನುಗುಣವಾದ ಸ್ಕ್ರೀನ್ ರೆಸೊಲುಶನ್ ಇಟ್ಟರೇ ಅವು ಚೆನ್ನಾಗಿ ಕಾಣುತ್ತವೆ.

ನಿಮ್ಮ ಮಾನಿಟರ್ ಹಳೆಯದಾಗಿದ್ದರೆ ಅದಕ್ಕೆ ೮೦೦x೬೦೦ ಸ್ಕ್ರೀನ್ ರೆಸೊಲುಶನ್ ಇಡಬಹುದು ಮತ್ತು ಪರದೆ ಅಲ್ಲಾಡುತ್ತಿದ್ದರೆ (ಶೇಕ್) ರಿಫ್ರೆಶ್ ರೇಟ್‌ಅನ್ನು ಅಧಿಕಗೊಳಿಸಿ.
ರಿಫ್ರೆಶ್ ರೇಟ್‌ಅನ್ನು ಅಧಿಕಗೊಳಿಸಲು ಈ ಕೆಳಕಂಡ ವಿಧಾನವನ್ನು ಅನುಸರಿಸಿ-
೧] ಮೊದಲು ನಿಮ್ಮ ಡೆಸ್ಕ್‌ಟಾಪ್‌ನ ಮೇಲೆ ಬಲ ಕ್ಲಿಕ್ (ರೈಟ್ ಕ್ಲಿಕ್) ಮಾಡಿ
೨] "ಪ್ರಾಪರ್ಟಿಸ್" ಆಯ್ಕೆಯನ್ನು ಆಯ್ದುಕೊಂಡು ನಂತರ "ಸೆಟ್ಟಿಂಗ್ಸ್" ಟ್ಯಾಬ್‌ಅನ್ನು ಕ್ಲಿಕ್ ಮಾಡಿ
೩] ಈಗ "ಅಡ್ವಾನ್ಸಡ್" ಗುಂಡಿಯನ್ನು ಅದುಮಿ
೪] ನಂತರ "ಮಾನಿಟರ್" ಎಂಬ ಟ್ಯಾಬ್‌ಅನ್ನು ಕ್ಲಿಕ್ ಮಾಡಿ "ಸ್ಕ್ರೀನ್ ರಿಫ್ರೆಶ್ ರೇಟ್" ಅನ್ನು ಅಧಿಕಮಾಡಿ [೭೦ ಅಥವಾ ೮೦]

Wednesday, January 20, 2010

ತಂತ್ರಾಂಶಗಳ ಪ್ರಕಾರಗಳು

ನಾವು ಉಪಯೋಗಿಸುವ ತಂತ್ರಾಂಶಗಳಲ್ಲಿ ಹಲವು ಪ್ರಕಾರಗಳಿವೆ. ಅವುಗಳಲ್ಲಿ ಮುಖ್ಯವಾದವುಗಳೆಂದರೆ Shareware, Freeware, Donationware, Adware ಮುಂತಾದವುಗಳು.

Shareware (ಶೇರ್‌ವೆರ್): ಈ ತಂತ್ರಾಂಶಗಳನ್ನು ಹಣ ಕೊಟ್ಟು ಕೊಂಡುಕೊಳ್ಳಬೇಕಾಗುತ್ತದೆ ಮತ್ತು ಇವುಗಳಿಗೆ ಅಂತರಾಷ್ಟ್ರಿಯ ಹಕ್ಕುಗಳು (ಕಾಪಿರೈಟ್) ಇರುತ್ತದೆ ಆದ್ದರಿಂದ ಇವನ್ನು ಕೊಂಡುಕೊಳ್ಳುವವರು ಮಾತ್ರ ಉಪಯೋಗಿಸಬೇಕೆಂಬ ನಿಬಂಧನೆಗಳಿರುತ್ತವೆ ಮತ್ತು ಈ ನಿಬಂಧನೆಗಳನ್ನು ಒಪ್ಪಿಕೊಂಡರೆ ಮಾತ್ರ ನೀವು ಇವುಗಳನ್ನು ಉಪಯೋಗಿಸಬಹುದು. ಉದಾಹರಣೆಗೆ ಮೈಕ್ರೊಸಾಫ್ಟ್ ಆಫಿಸ್, ಕ್ಯುಟ್ ಎಫ್.ಟಿ.ಪಿ

Freeware (ಫ್ರೀವೆರ್): ಇಂತಹ ತಂತ್ರಾಂಶಗಳನ್ನು ನೀವು ಉಚಿತವಾಗಿ ಉಪಯೋಗಿಸಬಹುದು ಮತ್ತು ಇತರರೊಂದಿಗೆ ಹಂಚಿಕೊಳ್ಳಬಹುದು. ಇವುಗಳು ಉಚಿತ ಅಥವಾ GNU ಹಕ್ಕುಗಳನ್ನು ಹೊಂದಿರುತ್ತವೆ. ಇವಗಳಲ್ಲಿಯ ಒಪನ್ ಸೌರ್ಸ್ ತಂತ್ರಾಂಶಗಳನ್ನು ನೀವೂ ಕೂಡ ಹೆಚ್ಚಿನ ಅಭಿವೃದ್ಧಿ ಪಡಿಸಿ ಉಪಯೋಗಿಸಬಹುದು ಮತ್ತು ಇತರರೊಂದಿಗೆ ಹಂಚಿಕೊಳ್ಳಬಹುದು. ಉದಾಹರಣೆಗೆ ಬರಹ, ನುಡಿ, ಕನ್ನಡ ಜಾಲತಾಣ ನಿರ್ವಾಹಕ, ಪಿಕಾಸಾ, ಫೈಲ್‌ಝಿಲ್ಲಾ

Donationware (ಡೊನೆಶನ್‌ವೆರ್): ಇಂತಹ ತಂತ್ರಾಂಶಗಳನ್ನೂ ನೀವು ಉಚಿತವಾಗಿ ಉಪಯೋಗಿಸಬಹುದು ಮತ್ತು ನಿಮಗೆ ಆ ತಂತ್ರಾಂಶ ಉಪಯುಕ್ತವೆನಿಸಿದಲ್ಲಿ ಆ ತಂತ್ರಾಂಶ ತಯಾರಕರಿಗೆ ಹಣವನ್ನು ದಾನವಾಗಿ ಕೊಡಬಹುದು. ಆ ತಂತ್ರಾಂಶವನ್ನು ಇನ್ನೂ ಹೆಚ್ಚು ಅಭಿವೃದ್ಧಿ ಪಡಿಸಲು ನೀವು ಪ್ರೋತ್ಸಾಹಿಸಿದಂತಾಗುತ್ತದೆ. ಉದಾಹರಣೆಗೆ ವಿ.ಎಲ್.ಸಿ ಮೀಡಿಯಾ ಪ್ಲೇಯರ್

Adware (ಆಡ್‌ವೆರ್): ಈ ತಂತ್ರಾಂಶಗಳ ಮೂಲಕ ಅದನ್ನು ಅಭಿವೃದ್ಧಿ ಪಡಿಸಿದವರು ತಮ್ಮ ಸಂಸ್ಥೆಯ ಅಥವಾ ಇತರರ ಜಾಹಿರಾತುಗಳನ್ನು ಪ್ರಚಾರ ಮಾಡುತ್ತಾರೆ.

ರೆಜಿಸ್ಟ್ರಿ ಎಡಿಟರ್ ಮತ್ತು ವಿಂಡೊಸ್ ಅಪ್-ಡೆಟ್ ನಿಷ್ಕ್ರೀಯ (Disable) ಗೊಳಿಸುವುದು

ರೆಜಿಸ್ಟ್ರಿ ಎಡಿಟರ್ ಅನ್ನು ನಿಷ್ಕ್ರೀಯಗೊಳಿಸುವುದು:
ರೆಜಿಸ್ಟ್ರಿ ಎಡಿಟರ್ ನಲ್ಲಿ ಸ್ವಲ್ಪ ಏರುಪೇರಾದರೂ ನಿಮ್ಮ ವಿಂಡೊಸನ ಕಾರ್ಯ ನಿರ್ವಾಹಕತೆಯಲ್ಲಿ ಅಡೆತಡೆಯಾಗಬಹುದು, ರೆಜಿಸ್ಟ್ರಿ ಎಡಿಟರ್ ನಲ್ಲಿ ಬದಲಾವಣೆಯಾದರೆ ಅದನ್ನು ಪುನಃ ಮೊದಲಿನ ಸ್ಥಿತಿಗೆ ಮರಳಿಸಲು ಕಷ್ಟವಾಗುತ್ತದೆ ಆದ್ದರಿಂದ ರೆಜಿಸ್ಟ್ರಿ ಎಡಿಟರ್ ಅನ್ನು ನಿಷ್ಕ್ರೀಯ (disable)ಗೊಳಿಸುವುದು ಒಂದು ಉತ್ತಮ ಉಪಾಯ. ರೆಜಿಸ್ಟ್ರಿ ಎಡಿಟರ್ ಅನ್ನು ನಿಷ್ಕ್ರೀಯಗೊಳಿಸಲು ಈ ಕೆಳಕಂಡ ಮಾಹಿತಿಯನ್ವಯ ನಿಮ್ಮ ಗಣಕದಲ್ಲಿ ಕೆಲವು ಬದಲಾವಣೆಗಳನ್ನು ಮಾಡಬೇಕು, ಅವುಗಳೆಂದಂದರೆ-
೧. ಮೊದಲು "Run" ಅನ್ನು ತೆಗೆಯಿರಿ
೨. ಅಲ್ಲಿ "gpedit.msc" ಎಂದು ಬರೆದು "Enter" ಕೀಲಿಯನ್ನು ಅದುಮಿ
೩. ಈಗ ಗ್ರುಪ್ ಪಾಲಿಸಿಸ್ ಎಂಬ ಕಿಟಕಿಯು ತೆರೆದುಕೊಳ್ಳುತ್ತದೆ, ಅದರಲ್ಲಿ ಯುಸರ್ ಕಂಫಿಗರೆಶನ್ ನಲ್ಲಿರುವ ಅಡ್ಮಿನಿಸ್ಟ್ರೆಟಿವ್ ಟೆಂಪ್ಲೆಟ್ಸ್ ಎಂಬ ಆಯ್ಕೆಯನ್ನು ಕ್ಲಿಕ್ಕಿಸಿ
೪. ಈಗ ಬಲ ಬದಿಯಲ್ಲಿರುವ "System" ಆಯ್ಕೆಯನ್ನು ಕ್ಲಿಕ್ಕಿಸಿ ಅದರಲ್ಲಿ "Prevent Access to Registry Editing Tools" ಮೇಲೆ ರೈಟ್ ಕ್ಲಿಕ್ ಮಾಡಿ
೫. ಅಲ್ಲಿ "Enable" ಆಯ್ಕೆಯನ್ನು ಅದುಮಿ. ಈಗ ನಿಮ್ಮ ರೆಜಿಸ್ಟ್ರಿ ಎಡಿಟರ್ ನಿಷ್ಕ್ರೀಯವಾಗಿರುತ್ತದೆ.

ವಿಂಡೊಸ್ ಅಪ್-ಡೆಟ್ ಅನ್ನು ನಿಷ್ಕ್ರೀಯಗೊಳಿಸುವುದು:
೧. ಮೊದಲು ಕಂಟ್ರೊಲ್ ಪ್ಯಾನೆಲ್ ಗೆ ಹೋಗಿ
೨. "Automatic Updates" ಅನ್ನು ಕ್ಲಿಕ್ಕಿಸಿ ಅದರಲ್ಲಿ "Turn Off Automatic Updates" ಅನ್ನು ಕ್ಲಿಕ್ಕಿಸಿ. "OK" ಗುಂಡಿಯನ್ನು ಅದುಮಿ.

"ಜಗತ್ತಿನ ಮೊಟ್ಟಮೊದಲ" All-in-one ಪಿಸಿ ಇನ್ ಎ ಕೀ ಬೋರ್ಡ್


ಸೈಬರ್ ನೆಟ್ ಕಂಪನಿಯು ತನ್ನ "ಜಗತ್ತಿನ ಮೊಟ್ಟಮೊದಲ" All-in-one ಪಿಸಿ ಇನ್ ಎ ಕೀ ಬೋರ್ಡ್ ಅನ್ನು ಸಿದ್ಧಪಡಿಸಿದೆ. ಎಂದರೆ ನಿಮ್ಮ ಬಳಿ ಈ ಕೀ ಬೊರ್ಡ್ ಒಂದಿದ್ದರೆ ಸಾಕು ಅದರಲ್ಲೇ ಸಿ.ಪಿ.ಯು, ರಾಮ್, ಡಿ.ವಿ.ಡಿ ದ್ರೈವ್, ಮೌಸ್ ಎಲ್ಲವೂ ಇದೆ! ನೀವು ಎಲ್ಲೇ ಹೋದರೂ ಇದನ್ನು ನಿಮ್ಮ ಜೊತೆಗೊಯ್ದರೆ ಸಾಕು, ನೀವು ಹೋದಲ್ಲಿ ಇರುವ ಗಣಕ ಪರದೆಗೆ (ಮಾನಿಟರ್) ಇದನ್ನು ಅಳವಡಿಸಬಹುದು. ಇದರಲ್ಲಿ ಸಧ್ಯಕ್ಕೆ Intel Core 2 Quad ಪ್ರಾಸೆಸರ್, ೪ ಜಿಬಿ ವರೆಗೆ ರಾಮ್, ೭೫೦ ಸಾಟಾ ಹಾರ್ಡ್ ಡಿಸ್ಕ್, ೧ ಜಿಬಿ ಇಂಟರ್ನಲ್ ವೈರ್ಲೆಸ್ ಲ್ಯಾನ್ ಅನ್ನು ಅಳವಡಿಸಲಾಗಿದೆ. ಹೆಚ್ಚಿನ ಮಾಹಿತಿಗಾಗಿ ತಾವು www.cybernetman.com ಗೆ ಭೇಟಿ ಕೊಡಬಹುದು.

Paypal ಆನ್-ಲೈನ್ ಬ್ಯಾಂಕಿಂಗ್ ಬಗ್ಗೆ ಮಾಹಿತಿ

ನೀವು Paypal ಆನ್-ಲೈನ್ ಬ್ಯಾಂಕಿಂಗ್ ಬಗ್ಗೆ ಕೇಳಿರಬಹುದು, ಅದರ ಬಗ್ಗೆ ಮಾಹಿತಿಪೂರ್ಣ ಲೇಖನ ಇಲ್ಲಿದೆ. Paypal ಇದು ಆನ್-ಲೈನ್ ಬ್ಯಾಂಕಿಂಗ್ ವ್ಯವಸ್ಥೆಯಾಗಿದೆ, ನೀವು Paypal ದಲ್ಲಿ ಖಾತೆ ತೆಗೆದರೆ ಅಂತರ್ಜಾಲದಲ್ಲಿ ವಸ್ತುಗಳನ್ನು ಕೊಂಡುಕೊಳ್ಳಬಹುದು Online Purchase) ಮತ್ತು ನೀವು ವೆಬ್ ಡೆವೆಲೊಪರ್ಸ್ ಆಗಿದ್ದರೆ ನೀವು Online selling ಮಾಡಬಹುದು. ಈ Paypal ನಲ್ಲಿ ಜಮೆಯಾದ ಹಣವನ್ನು ನೀವು ನಿಮ್ಮ ಬ್ಯಾಂಕಿಗೆ ವರ್ಗಾಯಿಸಬಹುದು. ಈಗ ಅಂತರ್ಜಾಲದಲ್ಲಿ online transaction ಜಾಲತಾಣಗಳಲ್ಲಿ ಇದೇ ಮೊದಲನೇಯದಾಗಿದೆ. ಈ ಜಾಲತಾಣದಲ್ಲಿ transaction ಮಾಡುವುದು ಸುಲಭ. ಈ ಜಾಲತಾಣದಲ್ಲಿ ಖಾತೆಯನ್ನು ತೆರೆಯಲು ೧೮ ವರ್ಷಕ್ಕಿಂತ ಮೇಲ್ಪಟ್ಟವರಾಗಿರಬೇಕು. ಖಾತೆಯನ್ನು ತೆರೆಯಲು ಇಲ್ಲಿ ಕ್ಲಿಕ್ಕಿಸಿ.

ಟ್ರೊಜನ್ ವೈರಸ್ ಗಳ ಬಗ್ಗೆ ಮಾಹಿತಿ

ಇತ್ತೀಚಿನ ದಿನಗಳಲ್ಲಿ ಪೆನ್ ಡ್ರೈವ್ ಗಳಲ್ಲಿ ಟ್ರೊಜನ್ ವೈರಸ್ ಗಳ ಹಾವಳಿ ಹೆಚ್ಚಾಗಿದೆ. ಈ ಟ್ರೊಜನ್ ವೈರಸ್ ಗಳು ಅತ್ಯಂತ ಸರಳವಾಗಿ ರಿಮುವೆಬಲ್ ಡಿವೈಸ್ ಗಳಿಂದ ಗಣಕಕ್ಕೆ ಹಬ್ಬುತ್ತವೆ ಮತ್ತು ಈ ತರಹದ ವೈರಸ್ ಗಳು ಬಹಳ ಅಪಾಯಕಾರಿಯಾಗಿರುತ್ತವೆ. ಇವುಗಳಲ್ಲಿ ಕೆಲವು ನಿಮ್ಮ ಗಣಕದ ಸ್ಟಾರ್ಟಪ್ ಎರಿಯಾದಲ್ಲಿ ಲೊಕೆಟ್ ಆಗುತ್ತವೆ ಮತ್ತು ಪ್ರತಿ ಬಾರಿ ನಿಮ್ಮ ಗಣಕವು ಪ್ರಾರಂಭವಾದಾಗ ಇವು ಕಾರ್ಯರೂಪಕ್ಕೆ ಬರುತ್ತವೆ ಮತ್ತು ಯುಸರ್ ನೆಮ್ ಮತ್ತು ಪಾಸವರ್ಡ್ ಅನ್ನು ನಿಮ್ಮಿಂದ ಪಡೆದು ನಂತರದ ದಿನಗಳಲ್ಲಿ ನಿಮ್ಮ ಗಣಕದ ಭದ್ರತೆಯನ್ನು ತೆಗೆದುಹಾಕಿ ನಿಮ್ಮ ಗಣಕದಲ್ಲಿರುವ ಅಮೂಲ್ಯವಾದ ಮಾಹಿತಿಯನ್ನು ಪಡೆಯುತ್ತವೆ.

  • ಟ್ರೊಜನ್ ವೈರಸ್ ಗಳನ್ನು ತಡೆಯುವ ಬಗೆಗಳು :
    ೧] ಪೆನ್ ಡ್ರೈವ್ ಗಳು ನಂಬಲರ್ಹ ಮೂಲಗಳಿಂದ ದೊರೆತಾಗ ಮಾತ್ರ ಅವನ್ನು ಬಳಸಿ
    ೨] ಉತ್ತಮವಾದ ಎಂಟಿ ವೈರಸ್ ಗಳನ್ನು ಬಳಸಿ (ಉದಾಹರಣೆಗೆ ನಾರ್ಟನ್, ಅವಾಸ್ಟ್ ಅಥವಾ ಎ.ವಿ.ಜಿ)
    ೩] ಎಂಟಿವೈರಸ್ ಗಳನ್ನು ಅಪ್-ಡೆಟ್ ಮಾಡಿ
    ೪] ಟ್ರೊಜನ್ ವೈರಸ್ ಗಳನ್ನು ತಡೆಯಲು "ಪಾಂಡಾ ಯು.ಎಸ್.ಬ್ ವ್ಯಾಕ್ಸಿನ್" ಅನ್ನು ಬಳಸಿ ಪಾಂಡಾ ಯು.ಎಸ್.ಬ್ ವ್ಯಾಕ್ಸಿನ್ ಬಗ್ಗ್ ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ಕಿಸಿ.

Thursday, January 14, 2010

ಕನ್ನಡ ತಂತ್ರಾಂಶ ಉಪಕರಣಗಳು (ಉಚಿತ CD)


ಕನ್ನಡ ತಂತ್ರಾಂಶ (ಕನ್ನಡ ವರ್ಡ್, ಎಕ್ಸೆಲ್ ಮುಂತಾದ ಒಪೆನ್ ಆಫಿಸ್ ತಂತ್ರಾಂಶಗಳು ಕನ್ನಡದಲ್ಲಿ), ಕನ್ನಡ ಆಟಗಳು, ಕನ್ನಡ ಡಿಕ್ಷನರಿ ಮತ್ತು ಕನ್ನಡ ಫಾಂಟ್ ಗಳನ್ನು ಒಳಗೊಂಡ ಉಚಿತ CD (ಅಡಕ ಮುದ್ರಿಕೆ) ಬೇಕೆ...... ಇಲ್ಲಿ ಕ್ಲಿಕ್ಕಿಸಿ.


ಕೇಂದ್ರ ಸರ್ಕಾರವು ಗಣಕದಲ್ಲಿ ಕನ್ನಡದ ಬಳಕೆಯನ್ನು ಹೆಚ್ಚಿಸಲು ಅನೇಕ ಉಚಿತ ಕನ್ನಡ ತಂತ್ರಾಂಶ, ಕನ್ನಡ ಫಾಂಟ್ ಹಾಗೂ ಇನ್ನೀತರ ಕನ್ನಡಕ್ಕೆ ಸಂಬಂಧ ಪಟ್ಟ ಟೂಲ್ಸ್ ಗಳನ್ನು ಒಳಗೊಂಡ ಉಚಿತ CD ಯನ್ನು ಹಂಚುತ್ತಿದೆ. ಈ ಅಡಕ ಮುದ್ರಿಕೆಯಲ್ಲಿ ಏನೇನಿದೆ ಎಂಬ ಸಿಂಹಾವಲೋಕನವನ್ನು ಇಲ್ಲಿ ಬರೆದಿದ್ದೇನೆ

>>
೧] ಟ್ರೂ ಟೈಪ್ ಫಾಂಟ್ಸ್ ಮತ್ತು ಕೀಬೊರ್ಡ್ ಡ್ರೈವರ್
೩] ಮಲ್ಟಿಫಾಂಟ್ ಕೀಬೊರ್ಡ್ ಇಂಜಿನ್ ಫಾರ್ ಟ್ರು ಟೈಪ್ ಫಾಂಟ್ಸ್
೩] ಯುನಿಕೋಡ್ ಒಪೆನ್ ಟೈಪ್ ಫಾಂಟ್ಸ್
೪] ಯುನಿಕೋಡ್ ಕೀಬೊರ್ಡ್ ಡ್ರೈವರ್
೫] ಜೆನೆರಿಕ್ ಫಾಂಟ್ಸ್ ಕೋಡ್ ಮತ್ತು ಸ್ಟೋರೆಜ್ ಕೋಡ್ ಕನ್ವರ್ಟರ್
೬] ಸ್ಪ್ರೆಡ್ ಶೀಟ್ (Excel), ಸಂಪಾದಕ (Word), ಪ್ರಸ್ತುತಿ (Powerpoint) ಹಾಗೂ ಡ್ರಾಯಿಂಗ್ ಟೂಲ್ಸ್ ಗಳು ಇಷ್ಟೇ ಅಲ್ಲದೇ ಫೈರ್ ಫಾಕ್ಸ್, ಥಂಡರ್ ಬರ್ಡ್ ಹಾಗೂ ಗೈಮ್ ಎಲ್ಲವೂ ಕನ್ನಡದಲ್ಲಿ
೭] ಪದ ಪರೀಕ್ಷಕ
೮]ಬೈಲ್ಯಾಂಗ್ಯುಅಲ್ ಡಿಕ್ಷನರಿ
೯] ಡೆಕೊರೇಟಿವ್ ಫಾಂಟ್ಸ್ ಡಿಸೈನ್ ಟುಲ್
೧೦] ಡಾಟಾಬೆಸ್ ಸಾರ್ಟಿಂಗ್ ಟೂಲ್
೧೧] ಟೈಪ್ ಅಸಿಸ್ಟೆಂಟ್
೧೨] ಮೈಕ್ರೊಸಾಫ್ಟ್ ವರ್ಡ್ ಟುಲ್ಸ್
೧೩] ಮೈಕ್ರೊಸಾಫ್ಟ್ ಎಕ್ಸೆಲ್ ಟುಲ್ಸ್
೧೪] ಟ್ರಾಂಸ್ಲಿಟರೆಶನ್ ಟುಲ್ಸ್
೧೫] ಟೈಪಿಂಗ್ ಟೂಟರ್ ಫಾರ್ ಕನ್ನಡ
೧೬] ಕನ್ನಡ ಟೆಕ್ಸ್ಟ ಟು ಸ್ಪೀಚ್
೧೭] ಕನ್ನಡ ಟೆಕ್ಸ್ಟ ಎಡಿಟರ್ (ನುಡಿ)
೧೮] ಕಂಟೆಂಟ್ ಮ್ಯಾನೆಜ್ ಮೆಂಟ್ ಸಿಸ್ಟಮ್ ಫಾರ್ ಕನ್ನಡ
೧೯] ಕನ್ನಡ ಲೈಬ್ರರಿ ಮ್ಯಾನೆಜ್ ಮೆಂಟ್ ಸಿಸ್ಟಮ್
೨೦] ಕನ್ನಡ ಲ್ಯಾಂಗ್ವೇಜ್ ಟೂಟರ್ ಪ್ಯಾಕೆಜ್
೨೧] ಕನ್ನಡ ಪರ್ಸನಲ್ ಯುಟಿಲಿಟಿಸ್
೨೨] ಕನ್ನಡ ಗೇಮ್ಸ್ ಮತ್ತು ಪಜಲ್ಸ್
೨೩] ಕನ್ನಡ ಲೋಗೊ
೧೪] ಕನ್ನಡ ಸೀಮಲೆಸ್ ಇ-ಮೇಲ್ ಕ್ಲೈಂಟ್

ಈ ಉಚಿತ ಕನ್ನಡ ಸಿ.ಡಿ ಯನ್ನು ಪಡೆಯಲು ರೆಜಿಸ್ಟ್ರೆಶನ್ ನ ಅವಶ್ಯಕತೆಯಿರುತ್ತದೆ. ರೆಜಿಸ್ಟರ್ ಮಾಡಿಕೊಳ್ಳಲು ಇಲ್ಲಿ ಕ್ಲಿಕ್ಕಿಸಿ.