ಕಂಪ್ಯು ಇನ್ ಕನ್ನಡ ಲೇಖನ ಪುಟಕ್ಕೆ ಸುಸ್ವಾಗತ ಇಲ್ಲಿ ನೀವು ಕಂಪ್ಯು ಇನ್ ಕನ್ನಡದಲ್ಲಿ ಪ್ರಕಟಿಸಿದ ಎಲ್ಲ ಲೇಖನಗಳನ್ನು ವೀಕ್ಷಿಸಬಹುದು ಮತ್ತು ನಿಮ್ಮ ಅಭಿಪ್ರಾಯವನ್ನು ಹಂಚಿಕೊಳ್ಳಬಹುದು. ಕಂಪ್ಯು ಇನ್ ಕನ್ನಡದ ಮುಖ್ಯ ಜಾಲತಾಣಕ್ಕೆ ಹೋಗಲು ಇಲ್ಲಿ ಕ್ಲಿಕ್ಕಿಸಿ. www.compuinkannada.co.cc

Saturday, April 10, 2010

WOT ಜಾಲತಾಣ ರೇಟಿಂಗ್ ಪ್ಲಗಿನ್

ನೀವು ದಿನವು ಹಲವಾರು ಜಾಲತಾಣಗಳಿಗೆ ಭೇಟಿ ನೀಡುತ್ತೀರಿ ಮತ್ತು ಅವುಗಳಿಗೆ ರೆಜಿಸ್ಟರ್ ಆಗುತ್ತೀರಿ ಆದರೆ ಆ ಜಾಲತಾಣಗಳು ಎಷ್ಟು ನಂಬಿಕೆಗೆ ಅರ್ಹವಾಗಿವೆ ಎಂಬುದು ನಿಮಗೂ ಗೊತ್ತಿರುವುದಿಲ್ಲ ಮತ್ತು ಆ ಜಾಲತಾಣದವರು ನಿಮ್ಮಿಂದ ಪಡೆದ ಮಾಹಿತಿಯನ್ನು ಗುಪ್ತವಾಗಿಡುವರೇ ಅಥವಾ ನಿಮಗೆ ಸ್ಪಾಮ್ ಮಾಡಲು ಬಳಸುವರೆ ಎಂಬುದು ಸಹ ಗೊತ್ತಾಗುವುದಿಲ್ಲ ಹೀಗಾಗಿ ನೀವು ಯಾವ ಜಾಲತಾಣವನ್ನು ನಂಬಬೇಕು ಮತ್ತು ಯಾವ ಜಾಲತಾಣವನ್ನು ನಂಬಬಾರದು ಎಂಬ ತಾಕಲಾಟಕ್ಕೆ ಬೀಳುತ್ತಿರಿ. ಇದನ್ನೇಲ್ಲ ತಡೆಯಲು ಮತ್ತು ವೆಬ್ ಸೈಟ್ ನ ಗುಣಮಟ್ಟವನ್ನು ಅರಿಯಲು ನೀವು WOT ಪ್ಲಗಿನ್ ಅನ್ನು ನಿಮ್ಮ ಗಣಕದಲ್ಲಿ ಅಳವಡಿಸಿಕೊಳ್ಳಬಹುದು. ಇದು ಉಚಿತವಾಗಿದ್ದು ಸಧ್ಯಕ್ಕೆ ಗೂಗಲ್ ಕ್ರೋಮ್, ಇಂಟರ್ ನೆಟ್ ಎಕ್ಸ್‍ಪ್ಲೊರರ್ ಮತ್ತು ಫೈರ್ ಫಾಕ್ಸ್ ಬ್ರೌಸರ್ ಗಳಿಗೆ ಈ ಪ್ಲಗಿನ್ ಅನ್ನು ಅಳವಡಿಸಿಕೊಳ್ಳಬಹುದು ಮತ್ತು ಇದು ಸಂಪೂರ್ಣ ಉಚಿತವಾಗಿದೆ. ಹೆಚ್ಚಿನ ಮಾಹಿತಿಗಾಗಿ www.mywot.com ಗೆ ಭೇಟಿ ನೀಡಿ.

ಶ್ರೀನಿವಾಸ ನಾಯಿಕ

0 comments:

Post a Comment